ಅವನೆಂದರೆ ಆಕೆಗೆ ಪ್ರೀತಿ, ಮಮಕಾರ, ಸರ್ವಸ್ವ, ಸಾಕ್ಷಾತ್ ಕೃಷ್ಣನ ಭಾವರೂಪ. ಆಕೆಯ ಪುಟ್ಟ ಪ್ರಪಂಚವನದಲ್ಲಿ ಇಂಪಾದ ಕೊಳಲ ದನಿ ಇವನು.

ಈ ಪುಟ್ಟ ಕೃಷ್ಣನ ಯಶೋಧೆಯಾಗಿ, ಆತನ ಮುದ್ದಾಡಿ ತನ್ನ ದಿನಚರಿ ಶುರು ಮಾಡುವುದೇ ಇವಳ ಕಾಯಕ. ಮುಂಜಾವಿನಲ್ಲೇ ಅವನಿಗೆ ಎಣ್ಣೆ ಸ್ನಾನವ ಮಾಡಿಸಿ, ಧೂಪವ ತೋರಿಸಿ, ರಂಗವಲ್ಲಿಯ ಹಾಕಲು ಅವನ ತುಂಟಾಟಗಳು ಶುರು.

ಈ ತಾಯಿ ಮಗುವಿನ ಸಂಬಂಧ ಅವಿನಾಭಾವ, ಅಭೂತಪೂರ್ವ. ಮಗು ದೇವರಂತೆ, ಇನ್ನು ದೇವರ ತಾಯಿ ದೇವತೆಯಾಗದೆ ಹೇಗೆ ಉಳಿದಾಳು.?

ಜಗತ್ತಲ್ಲಿ ನಿಶ್ಕಲ್ಮಶ, ನಿಸ್ವಾರ್ಥ, ಶುದ್ಧ ಪ್ರೇಮವೊಂದಿದ್ದರೆ ಅದು ತಾಯಿ-ಮಗುವಿನದ್ದು ಮಾತ್ರವೇ!!